ಜಯದ ಹಾದಿ ಹಾದಿ ಸುಗಮವಾಗಿರಲಿ, ಕಲ್ಲನ್ನು ಎತ್ತಿ ದೂರ ನೂಕಿ, ಧೂಳನ್ನು ಉಡುಗಿ ಬಿಸಾಕಿ. ಆರಿಸಿಕೊಂಡು ಹೂವ ತನ್ನಿ. ನಿಮ್ಮ ಹಾದಿಗೆ ನೀವೇ ಹೂವ ಹರಡಿಕೊಳ್ಳಿ. ಮುಳ್ಳುಗಳ ಭೇದಿಸಿ ಎಸೆಯಿರಿ. ನಿಮ್ಮ ಹಾದಿಗೆ, ನೀವೇ ಅರವಟ್ಟಿಗೆಗಳ ಸ್ಥಾಪಿಸಿಕೊಳ್ಳಿ, ಇತರರು ನಿಮ್ಮ ನೀರಡಿಕೆ ತಣಿಸಲಾರರು ನೆನಪಿಡಿ! ನಿಮ್ಮ ಹಾದಿಗೆ, ಕಂದೀಲು ನೀವೇ ಹೊತ್ತು ನಡೆಯಬೇಕು, ಆ ಬೆಳಕಲ್ಲಿ ಘಮಿಸುವ ಜಯದ ಹೂಗಳ ನೋಡಬೇಕು. ಉಮಾರಾಣಿ ಪೂಜಾರ
ಕವಯತ್ರಿ | ಲೇಖಕಿ | ಕಥೆಗಾರ್ತಿ | ಕಾದಂಬರಿಕಾರ್ತಿ | ಬ್ಲಾಗರ್ Umaranipujar@gmail.com "ಸ್ತ್ರೀವಾದ", "ಓ ಸಖಿ", "Cherry Blossom", “ಪ್ರೀತಿ ಎಂದರೇನು?”, “ವಸಂತದ ಸೊಬಗು”, “ರೋಧನೆ”, “ನಿನಾದ”, ಹಾಗೂ "ಮನ್ವಂತರ" ಅವರ ಪ್ರಮುಖ ಕೃತಿಗಳು. "ಚಪ್ಪಾಳೆಗಳ ನಡುವಿನ ಏಕಾಂತ" ಅವರ ಕಥಾ ಸಂಕಲನ. “ನಾಗಬನ” ಎಕೋ-ಫೆಮಿನಿಸ್ಟ್ ಕಾದಂಬರಿ ಪ್ರಕಟವಾಗುವುದರಲ್ಲಿದೆ.ಅವರು ಕರ್ನಾಟಕ ಸಾಹಿತ್ಯ ಸೇವಾಸಿರಿ ಪ್ರಶಸ್ತಿ, 2026ರ Universal Icon Women Achievers Award ಹಾಗೂ ಬಸವ ಶ್ರೀ ಕಾಯಕ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರು.