Skip to main content

Posts

Showing posts from January, 2026

ಸಂಕ್ರಾಂತಿ

ಬಂದಿದೆ ನವ ಸಂಕ್ರಾಂತಿ, ತರಲಿ ಎಲ್ಲರ ಬಾಳಿಗೆ ಸುಖಶಾಂತಿ, ಸರ್ವರ ಮೊಗದಲ್ಲಿ ಮೂಡಲಿ ಕಾಂತಿ ; ಆಗಲಿ ಹಳೆಯ ರಾಗದ್ವೇಷಗಳ ವಾಂತಿ. ಅಂತರಿಕ್ಷದಲ್ಲಿ ಸೂರ್ಯನ ಸ್ಥಾನಪಲ್ಲಟ; ಸಂಕ್ರಾಂತಿ ಹಬ್ಬ ಕಣ್ಣಿಗೆ ಸುಂದರ ನೋಟ. ಚಿಣ್ಣರು ಖುಷಿಯಲಿ ಹಾರಿಸುವರು ಗಾಳಿಪಟ, ಅಡುಗೆಮನೆಯಲ್ಲಿ ತಯಾರಾಗುವುದು ಹಬ್ಬದೂಟ. ಸುತ್ತಲೂ ಮಾಗಿಯ ಚಳಿ ; ಆಗಾಗ ಬೀಸುವ ಥಂಡಿ ಗಾಳಿ. ಕಬ್ಬಿನ ಸಿಹಿ ಸವಿಯುವುದು ; ಹೊಸ ಬಟ್ಟೆಯ ಧರಿಸುವುದು. ಎಳ್ಳು ಬೆಲ್ಲ ನೀಡಲಿ ಬಾಳಿಗೆ ಸಿಹಿ, ದೂರವಾಗಲಿ ಎಲ್ಲ ನೋವಿನ ಕಹಿ. ಬೇಕಾಗಿವೆ ಒಳ್ಳೆ ಶುಭ ಹಾರೈಕೆಗಳು ; ದೂರವಾಗಲಿ ಕೊಂಕು ಸುಳ್ಳುಮಾತುಗಳು. ಎಳ್ಳು ಬೆಲ್ಲವನ್ನು ಹಂಚೋಣ, ಒಳ್ಳೆ ಮಾತಾಡೋಣ, ದ್ವೇಷ ಹಗೆತನವನ್ನು ಅಳಿಸೋಣ, ಪ್ರತಿಕ್ಷಣವನ್ನು ಸಂತೋಷದಿಂದ ತುಂಬಿಸೋಣ. ಉಮಾರಾಣಿ ಪೂಜಾರ

ಇರಿದು ಕೇಳುತ್ತಾರೆ

 ಅವರು  ನಿನ್ನ ಕಣ್ಣಿಗೆ  ಮಣ್ಣೇರಚಿ  ಕೇಳುತ್ತಾರೆ, ಉರಿಯುತ್ತಿದೆಯೇ  ಎಂದು! ಅವರು  ನಿನ್ನ  ಇರಿದು ಕೇಳುತ್ತಾರೆ  ರಕ್ತ  ಬರುತ್ತಿದೆಯೇ  ಎಂದು! ಅವರು  ನಿನ್ನನ್ನು  ಹಿಂಡಿ ಕೇಳುತ್ತಾರೆ  ನೋವಾಗುತ್ತಿದೆಯೇ  ಎಂದು. ಅವರು  ನಿನ್ನನ್ನು  ಹಿಂಸಿಸಿ  ಕೇಳುತ್ತಾರೆ, ಯಾತನೆ  ಆಗುತ್ತಿದೆಯೇ  ಎಂದು! ಏನು ಹೇಳುವುದು!

ಗಾಯ ಮಾಯವಾಗಲು

 ಗಾಯ  ಮಾಯವಾಗಲು ಕೆರೆಯುವ  ಅವಶ್ಯ ಇರುವುದಿಲ್ಲ. ಬೇಕಂತಲೇ  ಗಾಯ ಮಾಡಿ  ಗುಣಪಡಿಸುವ  ಇರದೆಯೂ ಸಲ್ಲ. ಗಾಯದ ಮೇಲೆ  ಮಾನವೀಯತೆ  ಇರುವವರು  ಉಪ್ಪು ಖಾರದಪುಡಿ ಹಾಕುವುದಿಲ್ಲ  ಪ್ರತಿ ಗಾಯವೂ  ಹಿತವಾಯಿತು  ಗುಣವಾಗುವಾಗ. ಉಪ್ಪು ಖಾರದಪುಡಿ  ಹಾಕಿ ಅವರು  ಖುಷಿ ಪಡುತ್ತಿದ್ದಾರೆ  ಪಡಲಿಬಿಡಿ, ಅಲ್ಲಿ ಹುಳಗಳಾಗುವ  ಯಾತನೆಯಿಲ್ಲ. ಹೌದು, ಅಲ್ಲಿ ತುಂಬುತ್ತಲೇ  ಇರುತ್ತದೆ ಕೀವು, ಒರೆಸಿಕೊಳ್ಳಬೇಡಿ  ಅದನ್ನು ಅವರು  ಮುಚ್ಚುತ್ತಾರೆ  ಖಾರದ ಪುಡಿಯಿಂದ. ಉಮಾರಾಣಿ