ಕನ್ನಡ ದೇಶದೊಳ್ ಶಾಂತಿಯುತ, ಸಂಪನ್ನ, ಕನ್ನಡ ದೇಶದೊಳ್, ನೋಡಿ ಸಾಕಾಯ್ತು ಇಂಗ್ಲೀಷ್ ಕುನ್ನಿಗಳ್. ಕನ್ನಡ ಗೊತ್ತಿಲ್ಲ ಎನ್ನುವ ಚೋರ ಮತಿಗಳ್. ತೋಡಿಕೊಳ್ತಿವೆ ತಮ್ಮ ತಮ್ಮ ಸಮಾಧಿಗಳ್. ಬಾಯಿ ಬಡ್ಕೋತಾರೆ ನವೆಂಬರ್ ಒಂದು ಬಂದ್ರೆ , ದಿನವೂ ಕನ್ನಡ ಮಾತಾಡೋಕೆ ಇವ್ರುಗೇನ್ ತೊಂದ್ರೆ, ಬಿದ್ದು ಬಿದ್ದು ಸಾಯ್ತಾವೆ ಇಂಗ್ಲೀಷ್ ಭಾಷೆ ಅಂದ್ರೆ. ಇವ್ರಿಗೇನು ಸಿಕ್ಕುತ್ತೆ ಹೀಗೆ ಕನ್ನಡ ಪದಗಳ್ ಕೊಂದ್ರೆ. ನಮ್ ಭಾಷೆಗೆ ಶಾನೆ ದೊಡ್ಡ ಇತಿಹಾಸ ಐತೆ, ಈಗ ಹುಟ್ಕೊಂಡ್ ಭಾಷೆಗುಳಾಗ ಏನೈತೆ? ಇಂಗ್ಲೀಷ್ ಮೋಹಿಗಳಿಗೇನ್ ಗೊತ್ತಾಗ್ತೈತೆ? ಕನ್ನಡ ಮಾತಾಡಿ ಅಂದ್ರೆ ತಗಿತಾವೆ ಕ್ಯಾತೆ. ಉಸಿರ್ಗಟ್ಟಿ ಸಾಯೋದಿಲ್ಲ ಬಳಸಿ ಕನ್ನಡ ಪದಗುಳ್ನ, ಹಾಳಾಗೋಕೆ ಬಿಡ್ಬೇಡಿ ಕನ್ನಡ ತಾಯಿ ಬಾಳ್ನಾ. ಬೇರೆಭಾಷೆ ಬಿಟ್ಟು ನೋಡಿ ಕನ್ನಡ ಸಿನಿಮಾಗಳ್ನ. ಇಲ್ದಿದ್ರೆ ಕನ್ನಡ ಪ್ರೇಮಿಯೆಂದು ಹೇಳ್ಬ್ಯಾಡಿ ಸುಳ್ನ. ಭಾಷೆ ಮ್ಯಾಗೆ ಪ್ರೇಮ ಇಲ್ಲದ್ ಮ್ಯಾಗೆ, ಎದುಕ್ ಬದುಕ್ತಿರಾ ಪ್ರಾಣಿಗಳ್ ಹಾಗೆ. ಮಾತಾಡಿ ದಿನಕ್ಕೆ ಒಂದಷ್ಟು ಕನ್ನಡದಾಗೆ, ಸಾಯಕ್ಕಿಲ್ಲ ಕನ್ನಡ್ ಬಳಸಿದ್ರೆ ಒಂದ್ಗಳಿಗೆ. ಕರ್ನಾಟಕದಾಗೆ ಹುಟ್ಟಿ ಕನ್ನಡ ಗೊತ್ತಿಲ್ಲ ಅಂತಾವೆ. ಇವ್ರ್ ಜನ್ಮುಕ್ ಬೆಂಕಿ ಹಾಕ್ತು, ಇವು ಎಲ್ಲಿಗೋಗ್ತಾವೆ? ನವೆಂಬರ್ ಒಂದು ಮಾತ್ರ ಜೈ ಜೈ ಎ...
ಕವಯತ್ರಿ | ಲೇಖಕಿ | ಕಥೆಗಾರ್ತಿ | ಕಾದಂಬರಿಕಾರ್ತಿ | ಬ್ಲಾಗರ್ "ಸ್ತ್ರೀವಾದ", "ಓ ಸಖಿ", "Cherry Blossom", “ಪ್ರೀತಿ ಎಂದರೇನು?”, “ವಸಂತದ ಸೊಬಗು”, “ರೋಧನೆ”, “ನಿನಾದ”, ಹಾಗೂ "ಮನ್ವಂತರ" ಉಮಾರಾಣಿ ಪೂಜಾರ ಅವರ ಪ್ರಮುಖ ಕೃತಿಗಳು. ಹನ್ನೆರಡು ಕಥೆಗಳನ್ನು ಹೊಂದಿದ "ಚಪ್ಪಾಳೆಗಳ ನಡುವಿನ ಏಕಾಂತ" ಅವರ ಕಥಾ ಸಂಕಲನ. ಪ್ರಸ್ತುತ “ನಾಗಬನ” ಎಕೋ-ಫೆಮಿನಿಸ್ಟ್ ಕಾದಂಬರಿ ಪ್ರಕಟಣಾ ಹಂತದಲ್ಲಿದೆ. ಅವರು ಕರ್ನಾಟಕ ಸಾಹಿತ್ಯ ಸೇವಾಸಿರಿ ಪ್ರಶಸ್ತಿ ಮತ್ತು 2026ರ Universal Icon Women Achievers Award ಪುರಸ್ಕೃತರು.